ಮರ್ಯಾದಾ ಪುರುಷೋತ್ತಮ,
ಕೌಸಲ್ಯ ನಂದನೆ,
ನಿನಗೇ ನನ್ನ ಅಭಿನಂದನೆ
ನಿನ್ನ ಮುಖದಲ್ಲಿರುವ ಜ್ಯೋತಿ,
ಅದೇ ದಿನವೂ ನನಗೇ ಸ್ಪೂರ್ತಿ,
ಬೆಳ್ಳಂಬೆಳಗ್ಗೆ ನಿನಗೆ ಆರತಿ,
ನಿನ್ನ ನಾಮವೇ ದೊಡ್ಡ ಕೀರ್ತಿ.
ಸಮಸ್ತ ಪ್ರಕೃತಿಯಲ್ಲಿ,
ನಿನ್ನ ಮೂರ್ತಿಯೇ ಕಾಣಲಿ
ಸದಾ ನಿನ್ನಲಿ ತುಂಬಿರಲು ನನ್ನ ಪ್ರೀತಿ,
ಕೊಡು ನನಗೇ ಭಕ್ತಿ.
ನಿನ್ನನು ವರ್ಣಿಸಲು ಸಾಲದು,
ಎಲ್ಲಾ ಬಾಶೆಗಲ್ಲಿರುವ ಸಾಲುಗಳು.
ನಿನ್ನನು ಹೊಗಳಲು ಸಾಲದು,
ಈ ಜಗತ್ತಿನಲ್ಲಿರುವ ಮನುಷ್ಯರು.
ಶ್ರೀಹರಿಯ ಅವತಾರವೇ,
ಲೋಕಕ್ಕೆ ನೀನೆ ಧ್ರುವ ತಾರೆ.
ನಾ ಇರುವ ವರಗೆ, ಈ ಜಗತಿನಳ್ಳಿ,
ನಿನ್ನ ಆಶೀರ್ವಾದ ನನ್ನ ಮೇಲೆ ಸದಾ ಇರಲಿ.
ತುಂಬಿರುವೆ ನೀನು, ನನ್ನ ಆತ್ಮದಲ್ಲಿ,
ನೀನೆ ಕಾಣುವೆ ಪರಮಾತ್ಮನಲ್ಲಿ,
ಲೋಕ ಕಲ್ಯಾಣಕ್ಕೆ ನಿನ್ನ ಜನನ,
ಸೀತಾ ಪತಿಯೇ, ಜನಾರ್ದನ.
ಜಗತಿನ ಅತಿ ದೊಡ್ಡ ಭಕ್ತ,
ನಮ್ಮ ಪ್ರೀತಿಯ ಹನುಮಂತ,.
ಹೊಂದಿರುವನು ಆ ಶಿವನ ರೂಪ,
ಚಿರಂಜೀವಿಯಾಗಿ ನಿನ್ನ ನಾಮ ಕೇಳಲೂ, ಅವರ ತಪ.
ಈ ಲೋಕಕ್ಕೆ ಮಂತ್ರ,
ನಿನ್ನ ನಾಮವೇ, ನಿರಂತರ,
ಮನಸಿಗೆ ಅದು ತರುವದು ಸ್ವತಂತ್ರ,
ನಿನ್ನ ಸೇರಲು, ಈ ನನ್ನ ದೇಹ, ಅಂತರ.
ಸೂರ್ಯನ ತೇಜಸ್ಸು, ಮುಖದಲ್ಲಿ,
ಚಂದ್ರನ ಶಾಂತವು, ಗುಣದಳ್ಳಿ,
ಗುಡುಗಿನಂತೆ ಶಕ್ತಿಯು , ಶೌರ್ಯದಲ್ಲಿ,
ಜ್ವಾಲಾಮುಖಿಯ ಬೆಂಕಿಯಂತೆ, ವೀರದಲ್ಲಿ.
ಜಯ ಶ್ರೀ ರಾಮ,
ಮರ್ಯಾದಾ ಪುರುಷೋತ್ತಮ,
ಕೌಸಲ್ಯ ನಂದನೆ,
ನಿನಗೇ ನನ್ನ ಅಭಿನಂದನೆ.
ಭಕ್ತ
ಸಂಜಿ-ಪೌಲ್ ಅರ್ವಿಂದ್
No comments:
Post a Comment