ಅವಳ ಕಣ್ಣಲ್ಲಿ ನನ್ನ ಜೀವವ ಕಂಡೆ,
ಅವಳ ಮುಖದಲ್ಲಿ ನನಗಾಗಿ ಹೊಳಪನ್ನು ಕಂಡೆ.
ಅವಳ ನಗುವಿನಲ್ಲಿ ಮನಶಾಂತಿಯನ್ನು ಕಂಡೆ,
ಅವಳ ಮಾತುಗಳಲ್ಲಿ ನನ್ನ ಸಂತೋಷವನ್ನು ಕಂಡೆ.
ಅವಳ ಹೃದಯದಲ್ಲಿ
ನನಗಾಗಿ ಒಂದು ಸ್ಥಳವನ್ನು ಕಂಡೆ,
ಅವಳ ಕೈಗಳಲ್ಲಿ
ನನ್ನ ಕೈಗಳು ಹಿಡಿದುಕೊಂಡಿರುವುದನ್ನು ಕಂಡೆ.
ಅವಳ ಜೊತೆ ಸೇರಿ,
ಅವಳೊಡನೆ ನಡೆಯುವ ಜೀವನದ ದಾರಿಯನ್ನು ಕಂಡೆ,
ಅವಳಲ್ಲಿ ನನ್ನ ಆತ್ಮದ
ಒಂದು ತುಂಡನ್ನು ಕಂಡೆ.
ಅವಳಲ್ಲಿ ನನ್ನ ಇಡೀ
ಜಗತ್ತನ್ನೇ ಕಂಡೆ.
ಅವಳಲ್ಲಿ ಇಷ್ಟೆಲ್ಲ ಕಂಡ ನನ್ನಲ್ಲಿ,
ಅವಳು ಅವಳನ್ನೇ ಕಾಣಲಿಲ್ಲ.
ನನ್ನ ಶಾಶ್ವತ ಪ್ರೀತಿಯಲ್ಲಿ,
ಅವಳು ನಿಜವನ್ನು ಕಾಣಲಿಲ್ಲ.
ಅವಳ ಹೆಸರನ್ನು ನನ್ನ
ಆತ್ಮದ ಮೇಲೆ ಬರೆದೆ,
ಅವಳಿಗಾಗಿ ಆ ಆತ್ಮದ
ಅಳುವನ್ನು ಅವಳು ಕೇಳಲಿಲ್ಲ.
By
Sanji-Paul Arvind

No comments:
Post a Comment