Thursday, July 23, 2026

ನಿನ್ನ ನೆನಪುಗಳ ಜೊತೆಗೆ


ತಂಗಾಳಿಯಂತೆ ನನ್ನ ಬಾಳೊಳಗೆ ನೀ ಬಂದೆ,
ಬಿರುಗಾಳಿಯಾಗಿ ನನ್ನ ಬಿಟ್ಟು ಹೋದೆ.
ಸಿಹಿ ಗಾಳಿಯಾಗಿ ನೀನಿದ್ದರೆ
ನನ್ನ ಬಾಳು ಒಂದು ಅಮೃತಧಾರೆ.

ನಿನ್ನನ್ನು ಸೇರಲು ದಾರಿ ಕಾಣದೆ,
ನಾ ಈ ಜೀವನದಲ್ಲೂ ಸೋತು ಹೋದೆ.
ಕಾಣದಂತೆ ಕಣ್ಮರೆಯಾದೆ,
ಈ ನನ್ನ ಕಣ್ಣುಗಳು ಮಾಡಿದ ತಪ್ಪು ಹೇಳದೆ.

ನನ್ನ ಜೊತೆ ನೀನಿದ್ದರೆ,
ನನ್ನ ಬಾಳಿನ ಎಲ್ಲಾ ದಿನವೂ ಹಬ್ಬದ ಆಚರಣೆ.
ನನ್ನ ಮನಸ್ಸನ್ನು ಒಡೆದು ಬಂದೆ ನೀನು ಒಳಗಡೆ,
ನಿನ್ನ ಒಂದು ನೋಟಕ್ಕೆ ಸೆರೆಯಾಯಿತು ನನ್ನ ಮನವೇ.

ನಿನ್ನ ನೆನಪಿನೊಳಗೆ ನಾನು ಕಳೆದು ಹೋದೆ,
ನಿನ್ನ ಪ್ರೀತಿಯ ಬಂಧನದಲ್ಲಿ ನಾನು ಸೋತು ಹೋದೆ.
ನಿನ್ನ ಜೊತೆ ಸೇರಿ ಬಾಳಲು ಕನಸೊಂದನ್ನು ಕಂಡೆ,
ನನ್ನ ಮನದೊಳಗೆ ಕಟ್ಟಿದೆ ಅಂದಧ ಒಂದು ಅರಮನೆ.

ಈಗ ನೀನಿಲ್ಲದೆ ನನ್ನ ದಿನಗಳು ಕೇವಲ ಕತ್ತಲೆ,
ಆ ಕತ್ತಲೆಯಲ್ಲೂ ನಾ ಒಂಟಿಯಾಗಿಯೆ ನಿಂತಿರುವೆ,
ನಿನ್ನ ನೆನಪುಗಳ ಜೊತೆಗೆ.

By
Sanji-Paul Arvind

No comments:

Post a Comment

எரிந்துபோன கப்பலில் எனது பயணம்

ஒளி மங்கும் அந்த இடத்தில், நான் இன்னும் உன்னைக் காண்கிறேன். நள்ளிரவின் கீற்றால் பிளக்கப்பட்ட இருளில் உன் முகம் தெரிகிறது; நீண்ட காலத்திற்கு ...